The one-plus-one strategy has to be implemented at any cost, said BJP's national president Amit Shah during a meet with his party legislators from Karnataka in Bengaluru. This strategy mandates that a legislator looks after his own constituency and also the one allotted to them by the party. <br /> <br />ಕರ್ನಾಟಕದಲ್ಲಿ ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕರ್ನಾಟಕ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.ಡಿ.31 ರಂದು ಬೆಂಗಳೂರಿನ ಯಲಹಂಕದ ರಾಯಲ್ ಆರ್ಕಿಡ್ ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದವು. 2018 ರ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಂತೆ ಈ ಸಂದರ್ಭದಲ್ಲಿ ಗಂಭೀರವಾಗೊ ಚರ್ಚೆ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಇನ್ನೂ ಒನ್ ಪ್ಲಸ್ ಒನ್ ಸ್ಟ್ರಾಟಜಿ ಜಾರಿಗೆ ಬಂದಿಲ್ಲ, ಏಕೆ? ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು."ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ನಾನು ಈ ಮೊದಲೇ ಸೂಚನೆ ನೀಡಿದ್ದೆ. ಆದರೆ ಅದು ಇದುವರೆಗೂ ಜಾರಿಗೆ ಬಂದಿಲ್ಲ, ಏಕೆ? ಒಂದು ಸಣ್ಣ ಕೆಲಸವನ್ನೂ ಮಾಡದೆ, ಗೆಲ್ಲಬೇಕು ಎಂದರೆ ಹೇಗಾಗುತ್ತದೆ?" ಎಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದ್ದಾರೆ. <br />